ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.ಇವರು ೧೯೩೧ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ.ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.ಕಲಬುರ್ಗಿಯಲ್ಲಿ "ರಂಗ ಮಾಧ್ಯಮ"ಎಂಬ ನಾಟಕ ಸಂಸ್ಥೆಯ ಸ್ಥಾಪಕರು‌.ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದರು. == ಕೃತಿಗಳು == === ನಾಟಕ === ಆನಿ ಬಂತಾನಿ. ರಿಹರ್ಸಲ್. ರತ್ತೋ ರತ್ತೋ ರಾಯನ ಮಗಳೇ. ದಿಂಡಿ. ವಿದೂಷಕ. ಹಳ್ಳಾ ಕೊಳ್ಳಾ ನೀರು. === ಕಾವ್ಯ === ನಂದಿಕೋಲು === ಕಾದಂಬರಿ === ಮಾಲತಿ ಮತ್ತು ನಾನು. ಯಾತನಾ ಶಿಬಿರ. ಗೋಹರಜಾನ್. ಕೆರೂರು ನಾಮ. ಚರ್ಚ್ ಗೇಟ್. === ಹಿಂದಿಗೆ ಅನುವಾದ === ಸಂಸ್ಕಾರ (ಕನ್ನಡ ಮೂಲ: ಯು.ಆರ್.ಅನಂತಮೂರ್ತಿ) ಕಾಡು (ಕನ್ನಡ ಮೂಲ: ಶ್ರೀಕೃಷ್ಣ ಆಲನಹಳ್ಳಿ) == ಪುರಸ್ಕಾರ == ೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ. ೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ. 2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ